ಹರಿವು

ಅನುವಾದ

ವ್ಯಾಪಾರ, ಕಾರ್ಪೊರೇಟ್, ವೈದ್ಯಕೀಯ, ಕಾನೂನು, ಶಿಕ್ಷಣ, ಕೃಷಿ, ಮನರಂಜನೆ, ಬ್ಯಾಂಕಿಂಗ್, ಹಣಕಾಸು ಮುಂತಾದ ಅನೇಕ ವಲಯಗಳಿಗೆ ಸಂಬಂಧಪಟ್ಟ ಬರಹ, ಆಡಿಯೋ ಹಾಗೂ ವಿಡಿಯೋಗಳನ್ನು ನಾವು ಅನುವಾದ ಮಾಡುತ್ತೇವೆ.

ಸಾಮರ್ಥ್ಯ ಹಾಗೂ ತಾಂತ್ರಿಕ ಕೌಶಲ್ಯ

ನಮ್ಮ ಬರಹಗಾರರು, ಹಲವು ಭಾಷೆಗಳಲ್ಲಿ ಪರಿಣತಿ ಹೊಂದಿದ್ದು, ಅವರು ನುರಿತ ಭಾಷಾ ಅನುವಾದಕರೂ ಆಗಿದ್ದಾರೆ. ಸನ್ನಿವೇಶ, ಎರಡೂ ಭಾಷೆಗಳ ವ್ಯಾಕರಣದ ನಿಯಮಗಳು, ಬರವಣಿಗೆಯ ರೀತಿ ನೀತಿಗಳು ಮತ್ತು ಸಾಮಾನ್ಯವಾಗಿ ಬಳಸುವ ನುಡಿಗಟ್ಟುಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುತ್ತೇವೆ. ಮೂಲ ಪಠ್ಯದ ಪದಗಳು ಮತ್ತು ಭಾವಾನುವಾದದ ಹದವಾದ ಮಿಶ್ರಣ ನಮ್ಮ ಅನುವಾದದಲ್ಲಿ ಗಮನಸೆಳೆಯುವ ಅಂಶವಾಗಿದೆ.

ಲೋಕಲೈಸ್

ವ್ಯಾಪಾರ, ಕಾರ್ಪೊರೇಟ್, ವೈದ್ಯಕೀಯ, ಕಾನೂನು, ಶೈಕ್ಷಣಿಕ, ಕೃಷಿ, ಮನರಂಜನೆ, ಬ್ಯಾಂಕಿಂಗ್ ಮತ್ತು ಹಣಕಾಸು ಮುಂತಾದ ಬೇರೆ ಬೇರೆ ವಲಯಗಳಿಂದ ನಾವು ಬರಹ, ಆಡಿಯೋ ಮತ್ತು ವಿಡಿಯೋ ಅನುವಾದ ಪ್ರಾಜೆಕ್ಟ್‌ಗಳನ್ನು  ಕೈಗೆತ್ತಿಕೊಳ್ಳುತ್ತೇವೆ. ನಮ್ಮ ಅನುವಾದಗಳ ಉತ್ತಮ ಗುಣಮಟ್ಟಕ್ಕಾಗಿ ಚೆನ್ನಾಗಿ ಒರೆಹಚ್ಚಿ (Proof Reading) ನೋಡಲಾಗುವುದು. ನಮ್ಮ ಅನುವಾದಕರ ತಂಡದಲ್ಲಿರುವವರ ತಾಯ್ನುಡಿ ಕನ್ನಡವಾಗಿದ್ದು, ಅವರೆಲ್ಲರೂ ಕನ್ನಡದಲ್ಲಿ ಪರಿಣತಿ ಹೊಂದಿದ್ದಾರೆ. ನಾವು ಆಡಿಯೋ / ವಿಡಿಯೋ ಕಾನ್ಫರೆನ್ಸ್ ಮೂಲಕ ನೇರ ಅನುವಾದ ಸೇವೆಗಳನ್ನು ಕೂಡ ಒದಗಿಸುತ್ತೇವೆ.

ಮನರಂಜನೆ ಮತ್ತು ಜಾಹಿರಾತು

ಮನರಂಜನೆಯ ಉದ್ಯಮದಲ್ಲಿ ಅನುವಾದವು ಮುಖ್ಯವಾಗಿ ಟೀವಿ, ಓಟಿಟಿ, ಜಾಹಿರಾತುಗಳು ಮತ್ತು ಚಲನಚಿತ್ರಗಳಿಗೆ ಬೇಕಾಗುತ್ತದೆ. ಚಲನಚಿತ್ರ ಡಬ್ಬಿಂಗ್‌ಗಾಗಿ ಸಂವಾದಗಳನ್ನು ಭಾಷಾಂತರಿಸಲು ನಾವು ಸೇವೆಗಳನ್ನು ಒದಗಿಸುತ್ತೇವೆ. ಒಂದು ವರದಿಯ ಪ್ರಕಾರ ಕರ್ನಾಟಕದಲ್ಲಿ 95% ರಷ್ಟು ಮನೆಗಳಲ್ಲಿ ಟೀವಿ ಇದೆ. ಇದು ಕನ್ನಡದ ಬಹಳಷ್ಟು ಟೀವಿ ಚಾನೆಲ್‌ಗಳಿಗೆ ವಿಷಯವನ್ನು ಭಾಷಾಂತರಿಸುವ ಅವಕಾಶದ ಬಾಗಿಲನ್ನು ತೆರೆಯುತ್ತದೆ. ಕನ್ನಡ ಭಾಷೆಯು ಅನೇಕ ವಲಯಗಳಲ್ಲಿ ಉದಾಹರಣೆಗೆ ಡಿಜಿಟಲ್ ಪಾವತಿಗಳು, ಆನ್‌ಲೈನ್ ಸರ್ಕಾರಿ ಸೇವೆಗಳು, ಜಾಹಿರಾತುಗಳು, ಡಿಜಿಟಲ್ ಸುದ್ದಿ ಇತ್ಯಾದಿಗಳಲ್ಲಿ ಹೆಚ್ಚಿನ ಬಳಕೆದಾರರ ನೆಲೆಯನ್ನು ಹೊಂದಿದೆ. ಹೀಗಾಗಿ ಓಟಿಟಿಯಲ್ಲಿನ ವಿಷಯಗಳ ಅನುವಾದಕ್ಕೆ ಬೆಟ್ಟದಷ್ಟು ಅವಕಾಶಗಳಿವೆ. ಈ ಎಲ್ಲಾ ಅನುವಾದದ ಕೆಲಸಗಳಿಗೆ ನಮ್ಮಲ್ಲಿ ಪರಿಣತರ ತಂಡ ಇದೆ. ನಾವು ಜಾಹಿರಾತುಗಳಿಗೆ ಅತ್ಯುತ್ತಮ ಅನುವಾದ ಒದಗಿಸುತ್ತೇವೆ ಮತ್ತು ಆ ಮೂಲಕ ಕನ್ನಡ ಜಾಹಿರಾತು ಉದ್ಯಮದಲ್ಲಿ ನೀವು ನಿಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಕಾನೂನು, ನಾಗರಿಕ ಮತ್ತು ಪೊಲೀಸ್

ಕರ್ನಾಟಕದ ಕಾನೂನು ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಕನ್ನಡದಲ್ಲಿರಬೇಕು. ನಮ್ಮ ಅನುವಾದ ಸೇವೆಗಳು ಪ್ರಕರಣದ ಸಾರಾಂಶಗಳು, ನಿಯಮಗಳು ಮತ್ತು ಷರತ್ತುಗಳು, ಪೊಲೀಸ್ ವರದಿಗಳು, ದೂರುಗಳು, ವಿಡಿಯೋ / ಆಡಿಯೋ ಟ್ರ್ಯಾನ್‍ಸ್ಕ್ರಿಪ್ಶನ್‍ಗಳು ಮತ್ತು ಪತ್ರಗಳಂತಹ ಪುರಾವೆಗಳು, ಕರಾರುಗಳಂತಹ ಎಲ್ಲಾ ಬಗೆಯ ಕಾನೂನು ದಾಖಲೆಗಳನ್ನು ಭಾಷಾಂತರಿಸಲು ಸಜ್ಜುಗೊಂಡಿವೆ. ನ್ಯಾಯಾಲಯದ ಕಲಾಪಗಳಲ್ಲಿ ಕನ್ನಡ ತಿಳಿಯದವರಿಗೆ ನೆರವಾಗಲು ಕೂಡ ನಾವು ಅನುವಾದಕ ಸೇವೆಗಳನ್ನು ಒದಗಿಸುತ್ತೇವೆ.

ವೈದ್ಯರು, ರೋಗಿಗಳು ಮತ್ತು ವರದಿಗಳು

ವೈದ್ಯಕೀಯ ಸಲಕರಣೆಗಳು ಮತ್ತು ಔಷಧೀಯ ಕ್ಷೇತ್ರಗಳ ಬೆಳವಣಿಗೆಯು, ಅದರಲ್ಲೂ ವಿಶೇಷವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಆಗಿರುವುದರಿಂದ, ಜೀವ ವಿಜ್ಞಾನ ವಿಷಯಗಳ ಲೋಕಲೈಸೇಶನ್ ಗೆ ಬಹಳ ಬೇಡಿಕೆ ಉಂಟಾಗಿದೆ. ಕರ್ನಾಟಕದ ಹಲವು ಸಂಸ್ಥೆಗಳು ಎಚ್‌ಐವಿ, ಕ್ಯಾನ್ಸರ್, ಕ್ಷಯರೋಗ ಮುಂತಾದ ಬೇರೆ ಬೇರೆ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸುತ್ತವೆ. ನಾವು ವೈದ್ಯಕೀಯ ಸಂಶೋಧನಾ ಪ್ರಬಂಧಗಳು, ಮಾಹಿತಿ ಕೈಪಿಡಿ, ಕರಪತ್ರಗಳು, ಕ್ಲಿನಿಕಲ್ ಪ್ರೋಟೋಕಾಲ್‌ಗಳು, ಅಧ್ಯಯನ ಒಪ್ಪಂದಗಳು, ವೈದ್ಯರ ಕೈಪಿಡಿಗಳು, ಪ್ರಕರಣದ ವರದಿ ಫಾರಂಗಳು, ರೋಗಿಗಳ ವರದಿಗಳ ಅನುವಾದ ಸೇವೆಗಳನ್ನು ಒದಗಿಸುತ್ತೇವೆ. ನಮ್ಮ ಸೇವೆಗಳಲ್ಲಿ ವೈದ್ಯಕೀಯ ಲೇಬಲ್‌ಗಳು, ಡೋಸೇಜ್ ಸೂಚನೆಗಳು ಮತ್ತು ಔಷಧಿ ಕಂಪನಿಯು, ಔಷಧಿ ಪ್ಯಾಕೇಜಿಂಗ್‌ ಮೇಲೆ ಸೂಚಿಸಲಾದ ಯಾವುದೇ ಮಾಹಿತಿಯ ಅನುವಾದ ಕೂಡ ಒಳಗೊಂಡಿವೆ. ವಿದೇಶಿ ವೈದ್ಯರು ಮತ್ತು ತಜ್ಞರು, ಸ್ಥಳೀಯ ರೋಗಿಗಳೊಂದಿಗೆ ಮಾತನಾಡಲು ಅನುವಾದಕರನ್ನು ನೀಡುವ ಮೂಲಕ ಕೂಡ ನಾವು ನೆರವಾಗುತ್ತೇವೆ.

ಕರಪತ್ರಗಳು, ಕೈಪಿಡಿಗಳು, ಟ್ಯುಟೋರಿಯಲ್

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆಡಿಯೋ/ವಿಡಿಯೋಗಳಾದ ವೆಬಿನಾರ್ ಮತ್ತು ಹೌ-ಟು ಟ್ಯುಟೋರಿಯಲ್‍ಗಳನ್ನು ಹೆಚ್ಚಿನ ಜನರಿಗೆ ಸ್ಥಳೀಯ ಭಾಷೆಯಲ್ಲಿ ತಲುಪಿಸಲು ಬೇಡಿಕೆಯಿಡುತ್ತಿರುವುದರಿಂದ, ಅಂತಹ ವಿಷಯಗಳ ಅನುವಾದಕ್ಕಾಗಿ ಬಹಳ ಅವಕಾಶಗಳಿವೆ. ನಮ್ಮ ಅನುವಾದ ಸೇವೆಗಳಲ್ಲಿ ವೆಬ್‌ಸೈಟ್, ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು, ವಿಡಿಯೋ ಗೇಮ್‌ಗಳು, ತಾಂತ್ರಿಕ ಡಾಕ್ಯುಮೆಂಟ್ ವರ್ಕ್‌ಫ್ಲೋಗಳು, ಬಳಕೆದಾರರ ಕೈಪಿಡಿಗಳು, ಸಿಸ್ಟಮ್ ಕೈಪಿಡಿ, ತಾಂತ್ರಿಕ ವಿಶೇಷಣಗಳು, ಡೇಟಾಶೀಟ್‌ಗಳು, ಎಲ್ಲಾ ಸ್ವರೂಪಗಳ ತರಬೇತಿ ಸಾಮಗ್ರಿಗಳು, ವ್ಯವಹಾರ ಪ್ರಸ್ತಾಪ, ಉತ್ಪನ್ನ ಫ್ಯಾಕ್ಟ್‌ಶೀಟ್, ಮಾರಾಟ ಸಾಧನಗಳು, ಕರಪತ್ರಗಳು, ಹಣಕಾಸು ವರದಿಗಳು ಮತ್ತು ನಿಯಂತ್ರಣ ವಸ್ತುಗಳು, ಹೂಡಿಕೆ-ಕಾರ್ಯಕ್ಷಮತೆ-ಮಾರುಕಟ್ಟೆ ವರದಿಗಳು ಮತ್ತು ಸಂಶೋಧನಾ ಮಾಹಿತಿಯ ಅನುವಾದವು ಒಳಗೊಂಡಿದೆ. ಕಾರ್ಪೊರೇಟ್ ಇವೆಂಟ್‍ಗಳಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಲು ಕೂಡ ನಾವು ಅನುವಾದಕರನ್ನು ಒದಗಿಸುತ್ತೇವೆ. ಇದರಿಂದ ಜನರಿಗೆ ಇನ್ನೂ ಹತ್ತಿರವಾಗಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನ

ನಾವು ವಿಜ್ಞಾನದ ಬರಹಗಳು, ತಾಂತ್ರಿಕ ದಾಖಲೆಗಳು, ಉತ್ಪನ್ನ ಬಿಡುಗಡೆ ಪ್ರಸ್ತುತಿಗಳು ಮತ್ತು ಸಮ್ಮೇಳನಗಳು, ಸಂಶೋಧನಾ ಆಡಿಯೋ / ವಿಡಿಯೋ ಇಲ್ಲವೇ ದಾಖಲೆಗಳು, ಕೋರ್ಸ್ ವಿವರಣೆ, ಸಂಶೋಧನಾ ಬರಹಗಳು, ಉಪನ್ಯಾಸ ಸಾಮಗ್ರಿಗಳು, ಶೈಕ್ಷಣಿಕ ಪ್ರಕಟಣೆಗಳು, ಆನ್‌ಲೈನ್ ಕೋರ್ಸ್‌ಗಳು, ವಸ್ತು ಸುರಕ್ಷತಾ ಮಾಹಿತಿಗಳು, ಶಬ್ದಕೋಶಗಳು, ವೈಜ್ಞಾನಿಕ ವಿಶ್ವಕೋಶ, ಗಣಿತ ಒಗಟುಗಳು, ಆ್ಯಪ್ಟಿಟ್ಯೂಡ್ ಪರೀಕ್ಷೆಗಳು, ಹೀಗೆ ಅನೇಕ ವಿಷಯಗಳನ್ನು ಅನುವಾದ ಮಾಡುತ್ತೇವೆ.

ಕೃಷಿ ತಂತ್ರಜ್ಞಾನ ಮತ್ತು ಅಲೈಡ್ ಸೈನ್ಸಸ್

ಕೃಷಿ ಮತ್ತು ಅದರ ಸಂಬಂಧಿತ ವಿಜ್ಞಾನಗಳ ವೇಗದ ಬೆಳವಣಿಗೆ ಈ ಕ್ಷೇತ್ರದಲ್ಲಿ ಭಾಷಾ ಸೇವೆಗಳ ಅಗತ್ಯವನ್ನು ಹುಟ್ಟುಹಾಕಿದೆ. ಕೃಷಿ ಆಧಾರಿತ ಉದ್ಯಮದ ಉತ್ಪನ್ನ ಕೈಪಿಡಿಗಳು, ಮಾರ್ಕೆಟಿಂಗ್ ವಸ್ತು, ಬಳಕೆದಾರ ಮಾರ್ಗದರ್ಶಿ ದಾಖಲೆಗಳು / ಆಡಿಯೋ / ವಿಡಿಯೋ, ತರಬೇತಿ ಮತ್ತು ತಾಂತ್ರಿಕ ಕೈಪಿಡಿಗಳು, ಬರಹಗಳು, ಒಪ್ಪಂದಗಳು, ಆಹಾರ ಸುರಕ್ಷತೆಯ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಕೃಷಿ ಸಂಬಂಧಿತ ಸಂಶೋಧನೆಯ ಪ್ರಬಂಧಗಳು, ದತ್ತಾಂಶ ಕೈಪಿಡಿಗಳು / ಆಡಿಯೋ / ವಿಡಿಯೋಗಳು, ಕರಪತ್ರಗಳು, ಕೈಪಿಡಿಗಳು ಮುಂತಾದ ಕೃಷಿ ವಲಯದಲ್ಲಿನ ಪ್ರಚಾರ ಸಾಮಗ್ರಿಗಳಿಗೆ ನಾವು ಅನುವಾದ ಸೇವೆಗಳನ್ನು ಒದಗಿಸುತ್ತೇವೆ. ನಾವು ಕೃಷಿ ಆಧಾರಿತ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಕೂಡ ಅನುವಾದ ಸೇವೆಗಳನ್ನು ಒದಗಿಸುತ್ತೇವೆ.

ಸಾಮಾನ್ಯ ಮತ್ತು ಮುಖ್ಯವಾಹಿನಿ

ಭಾಷಾ ಸೇವೆಗಳಿಗೆ, ಅದರಲ್ಲೂ ವಿಶೇಷವಾಗಿ ಅನುವಾದ ಸೇವೆಗಳಿಗೆ ಭವಿಷ್ಯದಲ್ಲಿ ಬೇಡಿಕೆ ಹುಟ್ಟುಹಾಕಲು ಭಾರತದಲ್ಲಿರುವ ಭಾಷಾ ವೈವಿಧ್ಯತೆ ಒಂದೇ ಸಾಕು. ಪ್ರಮಾಣಪತ್ರಗಳು, ಪತ್ರಗಳು, ಮಿಂಚೆಗಳು, ವಲಸೆ ದಾಖಲೆಗಳು, ಸಮ್ಮೇಳನ ಭಾಷಣಗಳು, ಪತ್ರಿಕಾ ಪ್ರಕಟಣೆಗಳು, ಅಧ್ಯಯನ ಸಾಮಗ್ರಿಗಳು ಮತ್ತು ಪಠ್ಯಕ್ರಮ, ಸುದ್ದಿಪತ್ರಗಳು, ಬುಲೆಟಿನ್‍ಗಳು, ಪ್ರಕಟಣೆಗಳು ಮತ್ತು ಅಪ್ಲಿಕೇಶನ್ ಲೋಕಲೈಸೇಶನ್ ನಂತಹ ವಿಷಯಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತೇವೆ.

ಬ್ಯಾಂಕಿಂಗ್ ಮತ್ತು ಹಣಕಾಸು

ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಲೋಕಲೈಸೇಶನ್ ಪರಿಹಾರಗಳು ಬೇಕಾಗುತ್ತವೆ, ಅದು ಅವರ ಗೌಪ್ಯ ಮಾಹಿತಿಯನ್ನು ಕಾಪಾಡುವುದರ ಜೊತೆಗೆ ನಿಖರವಾದ ಅನುವಾದವನ್ನು ನೀಡಬೇಕು. ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ನಿರ್ದಿಷ್ಟ ಲೋಕಲೈಸೇಶನ್ ಅನ್ನು ಕನ್ನಡದಲ್ಲಿ ನೀಡುವ ಪರಿಣತಿ ನಮಗಿದೆ. ಭಾವ ಮತ್ತು ಶೈಲಿಯನ್ನು ಕಾಪಾಡಿಕೊಂಡು ಸೂಕ್ಷ್ಮ ವಿಷಯಗಳ ಅನುವಾದವನ್ನು ಕೂಡ ನಾವು ಅತ್ಯಂತ ನಿಖರವಾದ ರೀತಿಯಲ್ಲಿ ಒದಗಿಸುತ್ತೇವೆ. ಸಾಮೂಹಿಕ ಮಾರುಕಟ್ಟೆಗಳಲ್ಲಿ ಇಂಟರ್ನೆಟ್ ನುಗ್ಗುವಿಕೆಯು ಎಲ್ಲಾ ಮೊಬೈಲ್ ಆಧಾರಿತ ಪಾವತಿಗಳನ್ನು ಪ್ರೇರೇಪಿಸಿದೆ. ಕನ್ನಡದ ನೆಲಕ್ಕೊಗ್ಗಿಸುವುದರಿಂದ, ಈ ಸಂಸ್ಥೆಗಳು ಒದಗಿಸುವ ಮುಖ್ಯವಾದ ಮತ್ತು ಉಪ ಸೇವೆಗಳನ್ನು ಬಳಸಿಕೊಳ್ಳಲು ಹೆಚ್ಚು ಮಂದಿಗೆ ಅನುಕೂಲವಾಗುತ್ತದೆ. ನಮ್ಮ ಸೇವೆಗಳಲ್ಲಿ ಗ್ರಾಹಕ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು / ವೆಬ್‌ಸೈಟ್‌ಗಳ ವಿಷಯ, ಟ್ರೇಡಿಂಗ್ ಅಪ್ಲಿಕೇಶನ್‌ಗಳು, ಬೇರೆ ಬೇರೆ ಲೋನ್ ಪ್ಲಾಟ್‍ಫಾರಂ ಇತ್ಯಾದಿಗಳ ಅನುವಾದ ಒಳಗೊಂಡಿದೆ.