ಕೆಲಸಕ್ಕೆ ಸಿಕ್ಕ ಅನಿಸಿಕೆಗಳು

ವೆಲ್ತಿ ಥೆರಪ್ಯೂಟಿಕ್ಸ್

ನಮ್ಮ ವ್ಯಾಪಾರವನ್ನು ಹಲವು ನುಡಿಗಳಲ್ಲಿ ಬೆಳೆಸಬೇಕೆಂಬ ಕನಸನ್ನು ನನಸಾಗಿಸಲು, ಹರಿವು ಕ್ರಿಯೇಶನ್ಸ್ ಬೆಟ್ಟದಶ್ಟು ನೆರವು ನೀಡಿ, ಮಹತ್ತರವಾದ ಪಾತ್ರ ವಹಿಸಿದೆ.

ವೆಲ್ತಿ ಥೆರಪ್ಯೂಟಿಕ್ಸ್ ತಂಡ,
ವೆಲ್ತಿ ಥೆರಪ್ಯೂಟಿಕ್ಸ್

ಸೌಂಡ್ ಮ್ಯಾಪ್ ಸ್ಟುಡಿಯೊ

ಮೇಲ್ಮಟ್ಟದ ಅನುವಾದಗಳನ್ನು ಮಾಡಿಕೊಡುವ ಕಂಪನಿಗಳಲ್ಲಿ ಹರಿವು ಕ್ರಿಯೇಶನ್ಸ್ ಕೂಡ ಒಂದು. ಅವರು ಎಂದಿಗೂ ಗಡುವಿನ ಮುಂಚೆಯೇ, ಅಚ್ಚುಕಟ್ಟಾಗಿ ಕೆಲಸ ಮುಗಿಸುತ್ತಾರೆ. ಅವರ ಅನುವಾದಗಳು ಸೊಗಸಾಗಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಯದ್ದಾಗಿರುತ್ತವೆ. ಅವರ ಅನುವಾದಕರ ತಂಡದೊಂದಿಗೆ ಕೆಲಸ ಮಾಡುವುದು ಬಹಳ ಸುಲಭ. ಅವರೆಲ್ಲರೂ ನಗುಮೊಗದಿಂದ ನಮ್ಮೊಡನೆ ಬೆರೆಯುತ್ತಾ ನಮಗೆ ಬೇಕಾಗಿರುವ ಗುಣಮಟ್ಟ ಮುಟ್ಟಲು ನೆರವಾಗುತ್ತಾರೆ. ನಮ್ಮ ಎಲ್ಲಾ ಪ್ರಾಜೆಕ್ಟ್‌ಗಳಿಗೆ ಹರಿವು ಕ್ರಿಯೇಶನ್ಸ್‌ನೊಂದಿಗೆ ಒಟ್ಟುಗೂಡಿ ಕೆಲಸ ಮಾಡುತ್ತಿರುವುದು ಬಹಳ ಖುಶಿ ಕೊಟ್ಟಿದೆ. ನಿಮಗೆ ಏನೇ ಬೇಕಿದ್ದರೂ, ಯಾವಾಗಲೂ ನಿಮ್ಮ ನೆರವಿಗೆ ನಿಲ್ಲುವ ರತೀಶ್ ಅವರಿಗೆ ಒಂದು ವಿಶೇಷ ಮೆಚ್ಚುಗೆ.

ಪ್ರಜ್ವಲ್ ಪೈ,
ಸೌಂಡ್ ಮ್ಯಾಪ್ ಸ್ಟುಡಿಯೊ

ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್

ನಮ್ಮ ಆಡಿಯೊ ಬುಕ್‍ಗಳನ್ನು ಹೊರತರಲು, ಹರಿವು ಕ್ರಿಯೇಶನ್ಸ್ ಎಂಬ ಬೆಲೆ ಕಟ್ಟಲಾಗದ ಪಾಲುದಾರ ಸಿಕ್ಕಿರುವುದು ನಮಗೆ ಸಂತಸ ತಂದಿದೆ. ಮೇಲ್ಮಟ್ಟದ ಆಡಿಯೊ ವಿಡಿಯೊಗಳನ್ನು ಮಾಡಿಕೊಡುವ ಪೂರ್ತಿ ಹೊಣೆಯನ್ನು ಹೊರುವ ನಂಬುಗೆಯ ಪಾಲುದಾರನಿಗಾಗಿ ನೀವು ಹುಡುಕುತ್ತಿದ್ದರೆ, ಹರಿವು ಕ್ರಿಯೇಶನ್ಸ್ ಬಿಟ್ಟು ಮುಂದೆ ಹೋಗಬೇಡಿ.

ವಸಂತ್ ಶೆಟ್ಟಿ,
ಡೈರೆಕ್ಟರ್ ಆಫ಼್ ಮಾರ್ಕೆಟಿಂಗ್, ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್