
ಸಿನಿಮಾ ಹೆಸರು: ಕಮಾಂಡೊ
ಹಮ್ಮುಗೆಯ ಬಗ್ಗೆ: ತನ್ನ ಸ್ವಂತ ನಿರ್ಮಾಣದಲ್ಲಿ, ಹರಿವು ಕ್ರಿಯೇಶನ್ಸ್ ಇದರ ಪೂರ್ತಿ ಡಬ್ಬಿಂಗ್ ಚಟುವಟಿಕೆಗಳನ್ನು ನೋಡಿಕೊಂಡಿತು.
ಶೈಲಿ: ಆ್ಯಕ್ಶನ್, ಥ್ರಿಲ್ಲರ್
ಕಲಾವಿದರು: ಅಜಿತ್ ಕುಮಾರ್, ವಿವೇಕ್ ಒಬೆರಾಯ್, ಕಾಜಲ್ ಅಗರ್‌ವಾಲ್, ಅಕ್ಶರ ಹಾಸನ್
ನಿರ್ದೇಶಕ: ಶಿವ
ಸಂಗೀತ: ಅನಿರುಧ್
ತಿರುಳು: ಅಜಯ್ ಕುಮಾರ್ (ಏ.ಕೆ), ಮೇಲ್ಮಟ್ಟದ ಉಗ್ರ ನಿಗ್ರಹ ದಳದ ವಿಶೇಷ ಏಜೆಂಟ್ ಹಾಗೂ ಫೀ಼ಲ್ಡ್ ಕಮಾಂಡರ್ ಆಗಿರುತ್ತಾನೆ. ಮುಖ್ಯವಾದ ಕಾರ್ಯಾಚರಣೆಯೊಂದರಲ್ಲಿ, ಪರಿಸ್ಥಿತಿಗಳು ಅವನಿಗೆ ಸವಾಲೊಡ್ಡಿ, ಅವನ ಕುಟುಂಬವನ್ನೂ ಅಪಾಯದ ಅಂಚಿಕೆ ದೂಡುತ್ತವೆ. ಏಜೆಂಟ್‍ಗಳ ಗುಂಪೊಂದು, ಅವನ ಮೇಲೆ ಹಗೆ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಇದೆಲ್ಲವನ್ನೂ ಹಿಮ್ಮೆಟ್ಟಿಸಿ, ಅಜಯ್ ಕುಮಾರ್ ಹೇಗೆ ಗೆಲುವಿನ ನಗೆ ಬೀರುತ್ತಾನೆ ಎಂಬುದನ್ನೇ ಈ ಸಾಹಸಪ್ರಧಾನ, ಪತ್ತೆದಾರಿ ಥ್ರಿಲ್ಲರ್ ಸಿನಿಮಾ ತೋರಿಸುತ್ತದೆ.
ತಮಿಳಿನಿಂದ ಕನ್ನಡಕ್ಕೆ ಡಬ್ ಮಾಡಿದ ಈ ಸಿನಿಮಾ, 2018 ರ ಆಗಸ್ಟ್ 31 ರಂದು ಕರ್ನಾಟಕದಲ್ಲಿ ಬಿಡುಗಡೆಯಾಯಿತು. ಸೈನ್ಸ್-ಫಿ಼ಕ್ಶನ್ ಸಿನಿಮಾವೊಂದು ಡಬ್ ಆಗಿ ಬಿಡುಗಡೆಗೊಂಡದ್ದು, ಕನ್ನಡದಲ್ಲಿ ಇದೇ ಮೊದಲು. ಬೆಂಗಳೂರಿನ ಹೃದಯ ಭಾಗ ಹಾಗೂ ಕರುನಾಡಿನ ಉದ್ದಗಲಕ್ಕೂ ಬಿಡುಗಡೆಯಾಗುವಂತೆ ನೋಡಿಕೊಳ್ಳಲಾಯಿತು.