ಗ್ರಾಹಕ: ಮೈಲಾಂಗ್ ಪುಸ್ತಕಗಳು

ಕೆಲಸ: ಓದುಗರ ಲೋಕದಲ್ಲಿ ಈ ಆಡಿಯೋ ಬುಕ್‌ಗಳು ಹೊಸ ಅಲೆಯನ್ನೇ ಎಬ್ಬಿಸಿವೆ. ಹೌದು, ಈ ಹೊಸಕಾಲದ ಹೊಸಬಗೆಯ ಕೆಲಸವನ್ನು ಮಾಡಲು ನಮಗೆ ಹೆಮ್ಮೆಯಿದೆ.

ಈಗ ಕೇಳುವುದು ಓದುವ ಹೊಸಬಗೆಯಾಗಿದೆ! ನಮಗೆ ಇಷ್ಟವಾದ ಪುಸ್ತಕಗಳನ್ನು ಇಡಿಯಾಗಿ ಈಗ ಕೇಳಿಸಿಕೊಳ್ಳಬಹುದು. ಚಿಕ್ಕಂದಿನಲ್ಲಿ ಅಜ್ಜಿಯ ಕತೆಯನ್ನು ಕೇಳುತ್ತಾ ಕಳೆದುಹೋದಂತೆ,  ಮೆಚ್ಚುಗೆಯ ಪುಸ್ತಕಗಳನ್ನು ಈಗ ಕೇಳುತ್ತಾ ಆ ಹೊತ್ತಗೆಯ ಲೋಕದೊಳಗೆ ನೀವೀಗ ಕಳೆದುಹೋಗಬಹುದು. ನಾವು ಇಂತಹ ಆಡಿಯೋ ಬುಕ್‌ಗಳನ್ನು ಮಾಡಲು ಬೇಕಾದ ಸೇವೆಗಳನ್ನು ನೀಡುತ್ತೇವೆ. ಕಾದಂಬರಿ, ಕತೆ, ಸಣ್ಣಕತೆ, ಕವನ ಸಂಕಲನ, ನಾಟಕ, ವ್ಯಕ್ತಿತ್ವ ವಿಕಸನ, ಇತಿಹಾಸ, ಮಕ್ಕಳ ಕತೆ, ಜೀವನ ಚರಿತ್ರೆ, ಆರೋಗ್ಯ, ಹೀಗೆ ಮುಂತಾದ ಕಾಲ್ಪನಿಕ ಇಲ್ಲವೇ ವಾಸ್ತವಿಕ ಪುಸ್ತಕಗಳನ್ನು ಆಡಿಯೋ ಬುಕ್ ಮಾಡಲು ಬೇಕಿರುವ ಎಲ್ಲಾ ಬಗೆಯ ಸೇವೆಗಳನ್ನು ನಾವು ನೀಡುತ್ತೇವೆ.

ನಮ್ಮ ಸೇವೆಗಳು:

  • ದನಿ ಮುದ್ರಿಸಲು ಬೇಕಾದ ಸ್ಟುಡಿಯೋ
  • ದನಿ ಕಲಾವಿದರು (ನಿಮ್ಮ ಪುಸ್ತಕಕ್ಕೆ ಸರಿಹೊಂದುವಂತಹ ದನಿ)
  • ನಮ್ಮ ಅನುಭವದ ಆಧಾರದ ಮೇಲೆ ನಿಮ್ಮ ಆಡಿಯೋ ಬುಕ್ ಹೇಗೆ ಬಂದರೆ ಚೆನ್ನ ಎಂಬ ಉಪಾಯಗಳು
  • ಡಬ್ಬಿಂಗ್ ಡೈರೆಕ್ಟರ್ – ಆಡಿಯೋ ಬುಕ್‌ ಕೆಲಸ ನೋಡಿಕೊಳ್ಳಲು
  • ಆಡಿಯೋ ಬುಕ್ ಹೇಗೆ ಬರಬೇಕು ಎಂಬ ಚರ್ಚೆಯಿಂದ ಹಿಡಿದು, ಕೊನೆಯದಾಗಿ ಆಡಿಯೋಬುಕ್ ಆಗಿ ಹೊರಬರುವವರೆಗೂ ಬೇಕಿರುವ ಎಲ್ಲಾ ಕೆಲಸಗಳ ಹೊಣೆಗಾರಿಕೆ
  • ಆಡಿಯೋ ಮಾದರಿಗಳು – .mp3, .wav, .wma, .aac  ಇಲ್ಲವೇ ನಿಮಗೆ ಬೇಕಾದ ಮಾದರಿಯನ್ನು ನೀಡಲಾಗುವುದು.

ನಮ್ಮ ಡಬ್ಬಿಂಗ್  ಹಾಗೂ ವಾಯ್ಸ್ ಓವರ್  ಸೇವೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.

ನಿಮ್ಮ ಮುಂದಿನ ಆಡಿಯೋ ಬುಕ್ ಮಾಡಲು ನಮ್ಮೊಂದಿಗೆ ಮಾತನಾಡಿ.