ಹರಿವು

ಟ್ರಾನ್ಸ್ಕ್ರಿಪ್ಶನ್

ತ್ವರಿತ ಮತ್ತು ನಿಖರವಾದ ಟ್ರಾನ್ಸ್ಕ್ರಿಪ್ಶನ್ ಸೇವೆಗಳು

ಸಾಮಾನ್ಯವಾಗಿ ಒಂದು ಆಡಿಯೋ ಅಥವಾ ವಿಡಿಯೋ ತುಣುಕನ್ನು (ನೈಜ ಸಮಯದಲ್ಲಿ ನಡೆಯುವ ಅಥವಾ ದ್ವನಿಮುದ್ರಣಗೊಂಡಿರುವ) ಅಥವಾ ದಾಖಲೆಯನ್ನು ಎಲೆಕ್ಟ್ರಾನಿಕ್ ಕೈಬರಹವಾಗಿ ಮಾರ್ಪಡಿಸುವ ಪ್ರಕ್ರಿಯೆಯನ್ನು ಟ್ರಾನ್ಸ್ಕ್ರಿಪ್ಶನ್ ಎನ್ನುವರು. ಇದಕ್ಕೆ ಸೆಮಿನಾರ್ ಕಾರ್ಯಕ್ರಮ, ಸಮಾರಂಭಗಳು, ಭಾಷಣಗಳು, ತರಗತಿಯ ಪಾಠಗಳು, ಚರ್ಚೆಗಳು ಇತ್ಯಾದಿಗಳು ಇದಕ್ಕೆ ಸಾಮಾನ್ಯ ಉದಾಹರಣೆಗಳು. ಇವುಗಳನ್ನು ಕ್ಲೈಂಟ್‍ನ ಅಗತ್ಯಗಳಿಗೆ ತಕ್ಕಂತೆ ಒಂದೋ ಅವರು ನುಡಿದಂತೆಯೇ ಅಥವಾ ಅಗತ್ಯ ವ್ಯಾಕರಣ ಬದಲಾವಣೆಗಳೊಂದಿಗೆ ಬರೆದು ಕೊಡಲಾಗುವುದು.

ಕೈಬರಹವಾಗಿ ಬೇಕಿರುವ ನಿಮ್ಮ ಆಡಿಯೋ, ವಿಡಿಯೋ ಅಥವಾ ದಾಖಲೆಯ ಸ್ಕ್ಯಾನನ್ನು ನಮಗೆ ಕಳುಹಿಸಿ. ನಮ್ಮ ಸೃಜನಾತ್ಮಕ ಮತ್ತು ಪ್ರತಿಭಾನ್ವಿತ ತಂಡದ ಸಹಾಯದೊಂದಿಗೆ ನಾವು ನಿಮ್ಮ ಆದ್ಯತೆಯ ಫಾರ್ಮ್ಯಾಟ್‍ನಲ್ಲಿ ತಿಳಿಸಲಾದ ಸಮಯದಲ್ಲಿ ಪರಿಪೂರ್ಣ ಪ್ರತಿಲೇಖನವನ್ನು ಕಳುಹಿಸುತ್ತೇವೆ. 100% ಡೇಟಾ ಅನುಸರಣೆಯೊಂದಿಗೆ, ಒಳ್ಳೆಯ ಅನುಭವ ಹೊಂದಿರುವ ನಮ್ಮ ತಂಡವು ತಿಳಿಸಲಾಗಿರುವ ಸಮಯದೊಳಗೆ ಪ್ರತಿಲೇಖನವನ್ನು ತಲುಪಿಸುತ್ತದೆ. ನಿಮ್ಮ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ನಮ್ಮ ಈ ಸೇವೆಯು ಒಂದು ಉತ್ತಮ ಪರಿಹಾರ ಹಾಗೂ ಪರಿಣಾಮಕಾರಿ ವಿಧಾನವಾಗಿದೆ.