ಹರಿವು

ವಾಯ್ಸ್ ಓವರ್

ತೆರೆಯ ಹಿಂದಿನ ದನಿ

ಯಾವುದೇ ವಿಡಿಯೋ ಇಲ್ಲವೇ ಆಡಿಯೋ ಬುಕ್‌ನಂತಹವುಗಳಿಗೆ, ಹಿನ್ನಲೆ ದನಿ ನೀಡಬೇಕಾದಲ್ಲಿ, ಅಚ್ಚುಕಟ್ಟಾಗಿ, ಸರಿಯಾದ ದನಿಯನ್ನು ಆಯ್ದು ಹೊಂದಿಸುವ ಕೆಲಸವನ್ನು ನಾವು ಮಾಡಿಕೊಡುತ್ತೇವೆ.

ಯಾವುದೇ ವಿಡಿಯೋಗೆ ಕೆಲವೊಮ್ಮೆ ತೆರೆಯ ಹಿನ್ನಲೆಯಲ್ಲಿ ಮಾತನಾಡಬೇಕಾದ ಅವಶ್ಯಕತೆಗಳಿರುತ್ತವೆ. ಡಾಕ್ಯುಮೆಂಟರಿ, ಜಾಹಿರಾತು ಹಾಗೂ ನಾಟಕಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕಾಗಿ ವಾಯ್ಸ್‌-ಓವರ್ ಚಳಕಗಳನ್ನು ಬಳಸಿ, ತಕ್ಕ ದನಿಯನ್ನು ಹೊಂದಿಸಿ ನಾವು ರೆಕಾರ್ಡ್ ಮಾಡಿಕೊಡುತ್ತೇವೆ.

ದನಿಯ ಪಾತ್ರ

ಕಥೆಯಲ್ಲಿನ ಪಾತ್ರವೆ ವಾಯ್ಸ್ ಓವರ್ ನೀಡಬಹುದು, ನೋಡುಗರನ್ನು ನೇರವಾಗಿ ಸಂಬೋಧಿಸಬಹುದು ಮತ್ತು ಪರದೆಯ ಮೇಲೆ ಸಂಭವಿಸಿದಂತೆ ಘಟನೆಗಳ ಬಗ್ಗೆ ಮಾತನಾಡಬಹುದು. ವಿಡಿಯೋದಲ್ಲಿರುವ ಪಾತ್ರಗಳ ಮಾತಿನ ನಡುವೆ ಬಂದುಹೋಗುವ ವಾಯ್ಸ್‌ ಓವರ್ ನೋಡುಗನಿಗೆ ಆ ವಿಡಿಯೋವನ್ನು ಇನ್ನೂ ಚೆನ್ನಾಗಿ ಅರಿಯುವಂತೆ ಮಾಡುತ್ತದೆ. ಕಲಿಕೆಯ ವಿಡಿಯೋಗಳು, ಜಾಹಿರಾತು, ಡಾಕ್ಯುಮೆಂಟರಿ, ಮತ್ತು ನಾಟಕಗಳಲ್ಲಿ ವಾಯ್ಸ್ ಓವರ್‌ನ ಪಾತ್ರ ದೊಡ್ಡದಿರುತ್ತದೆ. ಸಿನೆಮಾಗಳಲ್ಲೂ ನಿರ್ದೇಶಕರು ಕತೆಗೆ ತಕ್ಕಂತೆ ವಾಯ್ಸ್ ಓವರ್ ಬಳಸಿ ಹೊಸತೊಂದು ಅನುಭವವನ್ನು ನೋಡುಗರಿಗೆ ನೀಡುತ್ತಾರೆ. ಈ ಎಲ್ಲಾ ಬಗೆಯ ದನಿಯ ಕೆಲಸಗಳನ್ನು ನಾವು ಚೆನ್ನಾಗಿ ಮಾಡಿಕೊಡುತ್ತೇವೆ. ಜಾಹಿರಾತು, ಡಾಕ್ಯುಮೆಂಟರಿ ಹಾಗೂ ಆಡಿಯೋ ಬುಕ್‌ಗಳಿಗೆ ಬೇಕಿರುವ ಒಳ್ಳೆಯ ದನಿಗಳ ಕಣಜ ನಮ್ಮ ಬಳಿ ಇದೆ. ಆ ಮೂಲಕ ನಾವು ನಿಮಗೆ ಹಿಡಿಸುವಂತಹ ದನಿಯನ್ನು ಆಯ್ದು ಕೆಲಸ ಮಾಡಿಕೊಡಬಲ್ಲೆವು.

ಧ್ವನಿ ಮತ್ತು ದೃಶ್ಯಗಳ ಬೆಸುಗೆ

ದೃಶ್ಯವನ್ನು ಮುಂದಿಡುವ ಸಾಧನಗಳೊಂದಿಗೆ ವಾಯ್ಸ್ ಓವರನ್ನು ಮೇಳೈಸುವ ಮೂಲಕ ನೋಡುಗನಿಗೆ ಒಂದು ವಿಭಿನ್ನ ಅನುಭವವನ್ನು ನೀಡಬಹುದಾಗಿದೆ. ಯಾವುದೇ ಚಿತ್ರ ನಿರ್ದೇಶಕನಿಗೆ ತಾನು ಹೇಳಬೇಕಿರುವ ವಿಷಯವನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರಲು ವಾಯ್ಸ್ ಓವರ್ ಒಂದು ಒಳ್ಳೆಯ ಸಾಧನವಾಗಿದೆ. ಹಿಂದಿನ ಘಟನೆಗಳ ಬಗ್ಗೆ ಪಾತ್ರಗಳು ಮಾಹಿತಿಯನ್ನು ಪ್ರಸಾರ ಮಾಡುವಾಗ ಅಥವಾ ಪಾತ್ರವು ಅವನ ಅಥವಾ ಅವಳ ಆಂತರಿಕ ಆಲೋಚನೆಗಳನ್ನು ನಿರೂಪಿಸುವಾಗ, ಈ ಎರಡು ಸನ್ನಿವೇಶಗಳಲ್ಲಿ ವಾಯ್ಸ್‌ ಓವರ್‌ಗಳನ್ನು ಮತ್ತು ದೃಶ್ಯಗಳನ್ನು ಬೆಸೆದು ಬಳಸಲಾಗುತ್ತದೆ.

ಹೊಂದಾಣಿಕೆಗಳಿಗೆ ತಕ್ಕಂತೆ ಬದಲಾವಣೆಗಳು

ಗ್ರಾಹಕರಿಗೆ ಬೇಕಿರುವ ದನಿ, ದನಿಯ ಏರಿಳಿತ ಹಾಗೂ ನಿಲುವು, ಈ ಸಂಗತಿಗಳಿಗಿರುವ ಪ್ರಾಮುಖ್ಯತೆಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಮ್ಮಲ್ಲಿ ವೃತ್ತಿಪರ ವಾಯ್ಸ್ ಓವರ್ ಕಲಾವಿದರಿರುವರು, ಹಾಗೆಯೇ ಗ್ರಾಹಕರಿಗೆ ಬೇಕಾದ ಆಯ್ಕೆ ಮಾಡಲು ಪ್ರತಿಭಾವಂತ ವಾಯ್ಸ್ ಓವರ್ ಕಲಾವಿದರು ಸಹ ಇದ್ದಾರೆ. ನಮ್ಮ ಎಲ್ಲಾ ವಾಯ್ಸ್ ಓವರ್ ಸೇವೆಗಳಿಗಾಗಿ ನಾವು ಸುಸಜ್ಜಿತ ರೆಕಾರ್ಡಿಂಗ್ ಸ್ಟುಡಿಯೋಗಳನ್ನು ಹೊಂದಿದ್ದೇವೆ. ವಾಣಿಜ್ಯ ಮತ್ತು ಪ್ರಚಾರ ಅಭಿಯಾನದಂತಹ ಸೇವೆಗಳಲ್ಲಿ, ವಾಯ್ಸ್ ಓವರ್ ಸರಿಯಾಗಿ ಮಾಡಿದರೆ, ಅದು ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರನ್ನು ಸೆಳೆಯುತ್ತದೆ. ವಿಮಾನದ ಸುರಕ್ಷತೆಯ ಮಾಹಿತಿ, ಐವಿಆರ್, ಮಾಲ್ ಹಾಗೂ ಸಾರ್ವಜನಿಕ ಜಾಗಗಳಲ್ಲಿ ಬಿತ್ತರಿಸುವ ಮಾತುಗಳು ಕೇಳುಗರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು, ಹೀಗೆ ದನಿಯ ಬಳಕೆ ಎಲ್ಲಿ ಆಗುತ್ತದೆ ಎಂದು ಅರಿತು ಅದಕ್ಕೆ ತಕ್ಕ ಹಾಗೆ ದನಿ ಹೊಂದಿಸುವ ಕೆಲಸ ನಮ್ಮದಾಗಿದೆ.

ನಮ್ಮ ಕೆಲಸದ ರೀತಿ ನಿಮಗೆ ಉತ್ತಮವಾದ ಸೇವೆಯನ್ನು ನೀಡುತ್ತದೆ

ನಮ್ಮ ಪಾರದರ್ಶಕ ಕೆಲಸ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಧ್ವನಿ ಬೆಸುಗೆಯ ಭರವಸೆಯನ್ನು ನೀಡುತ್ತದೆ. ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ ನಂತರ, ಸ್ವರ, ಲಿಂಗ, ವಯಸ್ಸು ಮತ್ತು ಏರಿಳಿತದ ಅಗತ್ಯಕ್ಕೆ ತಕ್ಕಂತೆ ದನಿಯ ಹುಡುಕಾಟದ ಕೆಲಸ ನಡೆದು, ಅದರ ಮೂಲಕ ಸರಿಯಾದ ದನಿಯನ್ನು ಆದಷ್ಟು ಬೇಗ ಕಂಡುಕೊಳ್ಳುತ್ತೇವೆ. ಸ್ಕ್ರಿಪ್ಟ್ ಮತ್ತು ವಾಯ್ಸ್-ಓವರ್ ಕಲಾವಿದರ ಆಯ್ಕೆಯ ಬಳಿಕ ವೃತ್ತಿಪರ ನಿರ್ದೇಶನದೊಂದಿಗೆ ರೆಕಾರ್ಡ್ ಮಾಡಲಾಗುತ್ತದೆ.

ನಿಮಗೆ ಬೇಕಾಗಿರುವ ವಾಯ್ಸ್-ಓವರ್

ನಮ್ಮಲ್ಲಿ ಅತ್ಯುತ್ತಮವಾದ ವಾಯ್ಸ್-ಓವರ್ ಕಲಾವಿದರು ಇದ್ದಾರೆ, ಅವರು ಉತ್ತಮ ಗುಣಮಟ್ಟದ ವಾಯ್ಸ್ ಓವರ್ ಸೇವೆಗಳನ್ನು ನೀಡುವ ಸಾಮರ್ಥ್ಯ ಹೊಂದಿರುವವರಾಗಿದ್ದಾರೆ. ನಾವು, ವಾಯ್ಸ್ ಓವರ್ ಟ್ಯಾಲೆಂಟ್ ಕಾಸ್ಟಿಂಗ್, ಟೀವಿ ಜಾಹಿರಾತುಗಳು, ಮೂವಿ ಟ್ರೇಲರ್‌ಗಳು, ರೇಡಿಯೋ ತಾಣಗಳು, ಜಿಂಗಲ್ಸ್, ಇಮೇಜಿಂಗ್, ಪಾಡ್ ಕ್ಯಾಸ್ಟಿಂಗ್, ಶೈಕ್ಷಣಿಕ ಮತ್ತು ಇ-ಕಲಿಕೆ, ವ್ಯವಹಾರ, ಕಾರ್ಪೊರೇಟ್ ತರಬೇತಿ, ಮೊಬೈಲ್ ಮತ್ತು ವಿಡಿಯೋ ಗೇಮ್, ಐವಿಆರ್ ಗಾಗಿ ಆಡಿಯೋ ಮೆನ್ಯು, ಆನ್- ಹೋಲ್ಡ್, ಜಿಪಿಎಸ್ ನ್ಯಾವಿಗೇಷನ್, ಕಾರ್ಟೂನ್, ಆಡಿಯೋ ಪುಸ್ತಕ, ಧ್ವನಿ ನಟನೆ, ನಿರೂಪಣೆ ಮತ್ತು ಸಾಕ್ಷ್ಯಚಿತ್ರ ಮತ್ತು ತುಟಿಚಲನೆಗೆ ಹೊಂದಾಣಿಕೆ, ಇತ್ಯಾದಿ ವಾಯ್ಸ್-ಓವರ್ ಹಮ್ಮುಗೆಗಳನ್ನು ಕೈಗೊಳ್ಳುತ್ತೇವೆ.

ನಮ್ಮ ಗ್ರಾಹಕರು ನೀಡಿರುವ ಹಮ್ಮುಗೆಗಳನ್ನು ತಿದ್ದುವಾಗ ಮತ್ತು ಬೆರೆಸುವಾಗ, ನಾವು ವಿಶೇಷವಾಗಿ ವಿಶ್ವದ ಅತ್ಯಂತ ಸುಧಾರಿತ ಮತ್ತು ವ್ಯಾಪಕವಾಗಿ ಬಳಸಲಾಗುವ ರೆಕಾರ್ಡಿಂಗ್ ಪ್ಲಾಟ್‌ಫಾರ್ಮ್ ಹಾಗೂ ಅತ್ಯಾಧುನಿಕ ಪರಿಕರಗಳನ್ನು ಬಳಸುತ್ತೇವೆ, ಅದರಿಂದ ಅತ್ಯಧಿಕ ಗುಣಮಟ್ಟದ ವಾಯ್ಸ್-ಓವರ್ ಸೇವೆ ಕೊಡುತ್ತೇವೆ.