ಹರಿವು

ವಿಷಯ ಬರವಣಿಗೆ

ಬೇಡಿಕೆಯಿಂದ ಸ್ಫೂರ್ತಿ

ಕನ್ನಡದಲ್ಲಿ ಗ್ರಾಹಕ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯು, ಭಾಷಾ ಸೇವೆಗಳಿಗೆ ಮತ್ತು ವಿಶೇಷವಾಗಿ ಕನ್ನಡ ವಿಷಯ ಬರವಣಿಗೆಗೆ ಬೇಡಿಕೆಯನ್ನು ಹೆಚ್ಚಿಸಿದೆ. ಟಿ.ವಿ ವಿಷಯದಿಂದ ಹಿಡಿದು ಕಾನೂನು ವಿಷಯ, ಕೃಷಿ ವಿಷಯಗಳನ್ನು ನೆಲಕ್ಕೊಗ್ಗಿಸುವಿಕೆಯ ಕೆಲಸದಿಂದಾಗಿ, ಕನ್ನಡದಲ್ಲಿ ಹೊಸ ಬರವಣಿಗೆಯ ಬೇಡಿಕೆ ಎಲ್ಲೆಡೆ ಹೆಚ್ಚಿದೆ.

ಕನ್ನಡದಲ್ಲಿ ಒಂದು ವಿಷಯದ ಕುರಿತಾಗಿ ಹೊಸ ಬರವಣಿಗೆಯು, ಇಲ್ಲಿಯವರೆಗೆ ಸರಿಯಾದ ಮಾನದಂಡಗಳನ್ನು ಹೊಂದಿರದ ಒಂದು ಸ್ವತಂತ್ರ ಸೇವೆಯಾಗಿತ್ತು. ನಾವು ಕನ್ನಡ ವಿಷಯ ಬರವಣಿಗೆಗೆ ವೃತ್ತಿಪರ ವೇದಿಕೆಯನ್ನು ಸ್ಥಾಪಿಸುತ್ತಿದ್ದಂತೆ, ಕನ್ನಡ ವಿಷಯ ಬರವಣಿಗೆಗೆ ಮಾನದಂಡವನ್ನು ನಿಗದಿಪಡಿಸುವ ಗುರಿ ಹೊಂದಿದ್ದೇವೆ.

ಮಾದರಿ ಬರಹಗಳು

ನಾವು ಕನ್ನಡದಲ್ಲಿ ಉತ್ತಮ ಗುಣಮಟ್ಟದ ಬರವಣಿಗೆಯ ಸೇವೆಗಳನ್ನು ನೀಡುತ್ತೇವೆ. ನಮ್ಮಲ್ಲಿ ಒಳ್ಳೆಯ ಕಸುವಿರುವ ಬರಹಗಾರರ ತಂಡವಿದೆ. ನಾವು ಬರೆದುಕೊಟ್ಟ ಬರವಣಿಗೆಯಿಂದ ನಮ್ಮ ಗ್ರಾಹಕರು ಅವರಿಗೆ ಬೇಕಿರುವ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ‌ಇಂಟರ್ನೆಟ್ ಹುಡುಕಾಟಕ್ಕೆ ಸಹಾಯವಾಗುವ ಹಾಗೆ ವಿಷಯಗಳನ್ನು ಬರೆಯಲಾಗುತ್ತದೆ. ಗ್ರಾಹಕರ ವ್ಯಾಪಾರ ಇಲ್ಲವೇ ಮೂಲ ವಿಷಯ ಯಾವುದೆಂದು ಚೆನ್ನಾಗಿ ಅರಿತುಕೊಂಡು, ಈಗಿನ ಓದುಗರಿಗೆ ಹಿಡಿಸುವ ರೀತಿಯಲ್ಲಿ ಬರಹ ಬರೆದುಕೊಡುತ್ತೇವೆ. ಬರವಣಿಗೆಯ ಮೂಲಕ ವೆಬ್‌ಸೈಟ್ ದಟ್ಟಣೆಯನ್ನು ಹೆಚ್ಚಿಸಲು, ಗ್ರಾಹಕರ ವಿಶ್ವಾಸವನ್ನು ಗಳಿಸಲು ಮತ್ತು ಯಶಸ್ವಿ ಬ್ರ್ಯಾಂಡ್ ಆಗಲು ಬೇಕಿರುವ ಒಳ‌್ಳೆಯ ಬರಹಗಳನ್ನು ನಾವು ನಿಮಗೆ ಬರೆದು ಕೊಡುತ್ತೇವೆ.

ನಮ್ಮ ಕನ್ನಡ ವಿಷಯ ಬರಹಗಾರರು ಹೆಚ್ಚು ಎಸ್‌ಇಓ ಸ್ನೇಹಿ ಮತ್ತು ಬಳಕೆದಾರ ಸ್ನೇಹಿ ವಿಷಯವನ್ನು ಬರೆಯುತ್ತಾರೆ. ಹಾಗಾಗಿ, ನಿಮ್ಮ ವೆಬ್‍ಸೈಟಿಗೆ ಎಸ್‌ಇಓ ಹೊಂದಿಸಿದಾಗ, ಆ ತಂತ್ರಗಳಿಗೆ ನಮ್ಮ ಬರವಣಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.‌ ಪರಿಣಾಮವಾಗಿ, ನಿಮ್ಮ ವೆಬ್‌ಸೈಟ್ ಅತ್ಯುನ್ನತ ಶ್ರೇಣಿಯಲ್ಲಿರಲು ಸಾಧ್ಯವಾಗುತ್ತದೆ. ಎಸ್‌ಇಓಗೆ ಹೊಂದಿಕೊಳ್ಳುವಂತೆ ಬರೆದ ವಿಷಯವು ನೀವು ಗುರಿಯಾಗಿಸಿದ ಓದುಗರು ಹಾಗೂ ಉತ್ಸಾಹಿ ಓದುಗರಿಗೆ ಬೇಗನೆ ಸಿಗುವುದು. ಹಾಗೆಯೇ ಇನ್ನೊಂದು ಮಾತು, ನಾವು ಎಸ್‌ಇಓ ಪದಗಳಿಗೆ ಜೋತುಬಿದ್ದು ಬರವಣಿಗೆಯನ್ನು ಹಾಳುಮಾಡುವುದಿಲ್ಲ, ಅವಶ್ಯಕತೆಗೆ ತಕ್ಕಂತೆ ಪದಗಳನ್ನು ಜೋಡಿಸುತ್ತೇವೆ.

ಸ್ವಂತಿಕೆಯೊಂದಿಗೆ ವಿಪುಲವಾಗಿರುವ ಸಾಧ್ಯತೆಗಳು

ಓದುವವರನ್ನು ಸೆಳೆಯಲು ಸ್ವಂತಿಕೆ ಎಂಬುದು ಮುಖ್ಯವಾಗಿದೆ. ನಮ್ಮ ಬರಹಗಾರರು ಬರೆಯುವ ವಿಷಯವು ಓದುಗರನ್ನು ಮೆಚ್ಚಿಸುತ್ತದೆ, ಮತ್ತು ಅದು ನಿಮ್ಮ ವಿಷಯ/ಸೈಟ್‌ಗೆ ಮತ್ತೆ ಮತ್ತೆ ಭೇಟಿ ನೀಡುವಂತೆ ಸೆಳೆಯುತ್ತದೆ. ಅದಲ್ಲದೇ, ನಮ್ಮ ಬರಹಗಾರರು ಪ್ರತಿಯೊಂದು ವಿಷಯವನ್ನು ಹೊಸ ಬಗೆಯಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ, ನಿಮ್ಮ ಕೊಡುಗೆಗಳು ಮತ್ತು ಸೇವೆಗಳಿಗೆ ಕುತೂಹಲವನ್ನು ಹುಟ್ಟುಹಾಕುತ್ತಾರೆ. ಸಣ್ಣ ಉದ್ಯಮವಾಗಲಿ ಅಥವಾ ದೊಡ್ಡ ಉದ್ಯಮವಾಗಲಿ, ನಿಮ್ಮ ವಿಷಯದ ಅಗತ್ಯತೆಗಳು ಏನೇ ಇರಲಿ, ನಾವು ಶ್ರದ್ದೆಯಿಂದ ಮಾಡುತ್ತೇವೆ. ಎಲ್ಲಾ ವಿಧದ ಯೋಜನೆಗಳನ್ನು ಕೈಗೊಳ್ಳುವ ಮತ್ತು ನಿಮ್ಮ ವೆಚ್ಚಗಳ ಮೇಲೆ ಹಿಡಿತವನ್ನು ಇಟ್ಟುಕೊಳ್ಳುವ ನಮ್ಮ ಸಾಮರ್ಥ್ಯವು, ನಮ್ಮನ್ನು ಅತ್ಯುತ್ತಮ ಸೇವೆ ಕೊಡುವವರಲ್ಲಿ ಮುಂದಾಳಾಗುವ ಹಾಗೆ ಮಾಡಿದೆ.