ಹರಿವು

ವ್ಯಾಖ್ಯಾನ

ಇದೊಂದು ಅರ್ಥವಿವರಣೆ ನೀಡುವ ಕಲೆ

ಭಾಷೆ ಎಂಬ ಅಡ್ಡಗೋಡೆಯಿದ್ದಾಗ, ಒಬ್ಬ ವ್ಯಕ್ತಿಗೆ ಅಥವಾ ಕಂಪನಿಗೆ ಆ ಅಡ್ಡಗೋಡೆಯನ್ನು ದಾಟಲು ನೆರವಾಗುವ ಪ್ರಕ್ರಿಯೆಯೇ ವ್ಯಾಖ್ಯಾನ. ಇಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಬೇರೆ ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಸುಲಭಗೊಳಿಸುವ ಸಂವಹನದ ಸೇತುವೆಯಂತೆ ಕೆಲಸ ಮಾಡುತ್ತಾನೆ. ಈ ಸೇವೆಯನ್ನು ಪ್ರಾಥಮಿಕವಾಗಿ ವೈಯಕ್ತಿಕ ಮತ್ತು/ಅಥವಾ ವ್ಯವಹಾರದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಸೇವೆಯನ್ನು ಏನನ್ನಾದರೂ/ಯಾರನ್ನಾದರೂ ಅರ್ಥಮಾಡಿಕೊಳ್ಳಲು ಅಥವಾ ಹೊಸ ಪ್ರೇಕ್ಷಕರನ್ನು ತಲುಪಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವ್ಯಾಖ್ಯಾನಕಾರರು ಸಂದೇಶದ ನಿಜವಾದ ಟೋನ್ ಅನ್ನು ಕಾಪಾಡಿಕೊಂಡು, ಸಂದೇಶದ ಅರ್ಥವಿವರಣೆಯನ್ನು ಅದರ ಮೂಲಾರ್ಥ ಕೆಡದಂತೆ ಕೊಡಬೇಕಿರುತ್ತದೆ.

ಹರಿವು ಕ್ರಿಯೇಷನ್ಸ್ ಕಾನೂನು, ಸಾಂಸ್ಥಿಕ, ವೈದ್ಯಕೀಯ, ವ್ಯವಹಾರ ಸಂಬಂಧಿತ ಮಾತುಕತೆಗಳು, ಸಭೆಗಳು, ತರಗತಿಗಳು, ಸೆಮಿನಾರ್‌ಗಳು, ಭಾಷಣಗಳು ಇತ್ಯಾದಿಗಳಿಗೆ ಉನ್ನತ ಮಟ್ಟದ ವ್ಯಾಖ್ಯಾನ ಸೇವೆಗಳನ್ನು ಒದಗಿಸುತ್ತದೆ. ನಮ್ಮ ಪರಿಣತ ವ್ಯಾಖ್ಯಾನಕಾರರ ತಂಡ ಲೈವ್ ವ್ಯಾಖ್ಯಾನ ಸೇವೆಯಲ್ಲಿ ಅನುಭವವನ್ನು ಹೊಂದಿದ್ದು, ಭಾಷಣದ ಮೂಲ ಅರ್ಥವನ್ನು ಕೆಡಿಸದೆ ಸಾಂಸ್ಕೃತಿಕವಾಗಿ ನಿಖರವಾದ ಅನುವಾದವನ್ನು ಕೊಡುತ್ತದೆ. ನಾವು ವ್ಯಾಖ್ಯಾನ ಸೇವೆಗಳನ್ನು ಒದಗಿಸುತ್ತಿರುವ ಭಾಷೆಗಳು; ಇಂಗ್ಲಿಷ್ ಮತ್ತು ಹಿಂದಿ. ವೈಯಕ್ತಿಕವಾಗಿ, ಫೋನ್ ಮೂಲಕ ಅಥವಾ ವಿಡಿಯೋ ಚಾಟ್‌ನಲ್ಲಿಯೂ ಸಹ ಸಂದೇಶವನ್ನು ರವಾನಿಸಲು ನೀವು ನಮ್ಮ ಸೇವೆಯನ್ನು ಪಡೆಯಬಹುದಾಗಿದೆ. ನಮ್ಮ ನುರಿತ ಭಾಷಾ ವೃತ್ತಿಪರರಿಂದ ನೀವು ಅತ್ಯುತ್ತಮವಾದ ವ್ಯಾಖ್ಯಾನ ಸೇವೆಗಳನ್ನು ಮಾತ್ರ ಸ್ವೀಕರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ನಾವು ಕಟ್ಟುನಿಟ್ಟಾದ ಮಾನದಂಡಗಳನ್ನು ನಿರ್ವಹಿಸುತ್ತೇವೆ. ನಮ್ಮ ವ್ಯಾಖ್ಯಾನಕಾರರು ಅರ್ಹ ವೃತ್ತಿಪರರಾಗಿದ್ದು, ನಿಮ್ಮ ಸಭೆಗಳು ಮತ್ತು ಸಮಾರಂಭಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಅನುಭವ ಮತ್ತು ಕೌಶಲ್ಯಗಳನ್ನು ಹೊಂದಿದ್ದಾರೆ.