slide1
slide5
slide4
slide1
previous arrow
next arrow

ನಾವೇನು ಮಾಡುತ್ತೇವೆ

ನಮ್ಮ ಸೇವೆಗಳು

ನಮ್ಮ ಕೆಲಸಗಳ ಕಿರುನೋಟ

ನಮ್ಮ ಪ್ರಾಜೆಕ್ಟ್‌ಗಳು

ಅನುವಾದ

ಲಕ್ಷ ಲಕ್ಷ ಪದಗಳ ಕನ್ನಡ ಅನುವಾದ

ಈ ನಮ್ಮ ಕನ್ನಡ ಅನುವಾದದ ಕೆಲಸ ಬೀಜದಿಂದ ಶುರುವಾಗಿ ಈಗ ಮರದಂತೆ ಬೆಳೆದಿದೆ. ಒಂದು ಪದದಿಂದ ಶುರುವಾಗಿದ್ದು, ಈಗ ಹತ್ತು ಲಕ್ಷಕ್ಕೂ ಹೆಚ್ಚು ಪದಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಅನುಭವ ಪಡೆದಿದೆ. ಆರೋಗ್ಯ, ಕಲಿಕೆ, ಬ್ಯಾಂಕಿಂಗ್, ಡಾಕ್ಯುಮೆಂಟರಿಗಳು ಹಾಗೂ ಮನರಂಜನೆಯ ವಿಡಿಯೋಗಳ ವಿಷಯಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸದಲ್ಲಿ ನಾವು ಎತ್ತಿದ ಕೈ. ವಿಡಿಯೋದಲ್ಲಿರುವ ಪಾತ್ರಗಳ ತುಟಿಚಲನೆಗೆ ಹೊಂದುವಂತೆ ಪದಗಳೊಡನೆ ಆಟವಾಡಿ ಬರಹ ಮಾಡುವುದು ನಮ್ಮ ಮುಖ್ಯ ಚಳಕಗಳಲ್ಲೊಂದು. ಹುಮ್ಮಸ್ಸಿನ ಹಾಗೂ ಹೊಸತನ್ನು ಯೋಚಿಸುವ ಗಟ್ಟಿ ತಂಡ ನಮ್ಮೊಂದಿಗೆ ಇದೆ, ಜೊತೆಗೆ ಬೇರೆ ಬೇರೆ ವಿಷಯಗಳ ಕುರಿತು ನುರಿತವರ, ಬರಹಗಾರರ, ಭಾಷಾ ವಿಜ್ಞಾನಿಗಳು ಇಲ್ಲವೇ ನುಡಿಯರಿಗರ ಸಂಪರ್ಕವೂ ನಮಗಿದೆ. ನಾವೆಲ್ಲರೂ ಸೇರಿದರೆ ಒಂದು ಬುದ್ಧಿವಂತ ಕೆಲಸಗಾರರ ತಂಡವಾಗುತ್ತೇವೆ, ನಿಮ್ಮ ಅನುವಾದದ ಕೆಲಸವನ್ನು ನೀವಂದುಕೊಂಡಂತೆ ಮಾಡಿಮುಗಿಸುತ್ತೇವೆ.

ಕೆಲಸಕ್ಕೆ ಸಿಕ್ಕ ಅನಿಸಿಕೆಗಳು

ನಮ್ಮ ಗ್ರಾಹಕರಿಂದ…

ವೆಲ್ತಿ ಥೆರಪ್ಯೂಟಿಕ್ಸ್

ನಮ್ಮ ವ್ಯಾಪಾರವನ್ನು ಹಲವು ನುಡಿಗಳಲ್ಲಿ ಬೆಳೆಸಬೇಕೆಂಬ ಕನಸನ್ನು ನನಸಾಗಿಸಲು, ಹರಿವು ಕ್ರಿಯೇಶನ್ಸ್ ಬೆಟ್ಟದಶ್ಟು ನೆರವು ನೀಡಿ, ಮಹತ್ತರವಾದ ಪಾತ್ರ ವಹಿಸಿದೆ.

ವೆಲ್ತಿ ಥೆರಪ್ಯೂಟಿಕ್ಸ್ ತಂಡ,
ವೆಲ್ತಿ ಥೆರಪ್ಯೂಟಿಕ್ಸ್

ಸೌಂಡ್ ಮ್ಯಾಪ್ ಸ್ಟುಡಿಯೊ

ಮೇಲ್ಮಟ್ಟದ ಅನುವಾದಗಳನ್ನು ಮಾಡಿಕೊಡುವ ಕಂಪನಿಗಳಲ್ಲಿ ಹರಿವು ಕ್ರಿಯೇಶನ್ಸ್ ಕೂಡ ಒಂದು. ಅವರು ಎಂದಿಗೂ ಗಡುವಿನ ಮುಂಚೆಯೇ, ಅಚ್ಚುಕಟ್ಟಾಗಿ ಕೆಲಸ ಮುಗಿಸುತ್ತಾರೆ. ಅವರ ಅನುವಾದಗಳು ಸೊಗಸಾಗಿದ್ದು, ಗುಣಮಟ್ಟದಲ್ಲಿ ವಿಶ್ವದರ್ಜೆಯದ್ದಾಗಿರುತ್ತವೆ. ಅವರ ಅನುವಾದಕರ ತಂಡದೊಂದಿಗೆ ಕೆಲಸ ಮಾಡುವುದು ಬಹಳ ಸುಲಭ. ಅವರೆಲ್ಲರೂ ನಗುಮೊಗದಿಂದ ನಮ್ಮೊಡನೆ

ಪ್ರಜ್ವಲ್ ಪೈ,
ಸೌಂಡ್ ಮ್ಯಾಪ್ ಸ್ಟುಡಿಯೊ

ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್

ನಮ್ಮ ಆಡಿಯೊ ಬುಕ್‍ಗಳನ್ನು ಹೊರತರಲು, ಹರಿವು ಕ್ರಿಯೇಶನ್ಸ್ ಎಂಬ ಬೆಲೆ ಕಟ್ಟಲಾಗದ ಪಾಲುದಾರ ಸಿಕ್ಕಿರುವುದು ನಮಗೆ ಸಂತಸ ತಂದಿದೆ. ಮೇಲ್ಮಟ್ಟದ ಆಡಿಯೊ ವಿಡಿಯೊಗಳನ್ನು ಮಾಡಿಕೊಡುವ ಪೂರ್ತಿ ಹೊಣೆಯನ್ನು ಹೊರುವ ನಂಬುಗೆಯ ಪಾಲುದಾರನಿಗಾಗಿ ನೀವು ಹುಡುಕುತ್ತಿದ್ದರೆ, ಹರಿವು ಕ್ರಿಯೇಶನ್ಸ್ ಬಿಟ್ಟು ಮುಂದೆ ಹೋಗಬೇಡಿ.

ವಸಂತ್ ಶೆಟ್ಟಿ,
ಡೈರೆಕ್ಟರ್ ಆಫ಼್ ಮಾರ್ಕೆಟಿಂಗ್, ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್

ನಮ್ಮ ಗ್ರಾಹಕರು

ನಮ್ಮ ಹೆಮ್ಮೆಯ ಜೊತೆಗಾರರು

ನಮ್ಮೊಡನೆ ಮಾತನಾಡಿ

ನಮ್ಮ ವಿವರ... 

ಮೊಬೈಲ್ ನಂಬರ್ : +91 9964777709

ಮಿಂಚೆ : info@harivucreations.com