ಸಿನೆಮಾ, ವೆಬ್ ಸೀರೀಸ್ ಮತ್ತು ಧಾರಾವಾಹಿಗಳ ಡಬ್ಬಿಂಗ್ ಹಾಗೂ ಕನ್ನಡ ಅನುವಾದದ ಕೆಲಸಗಳಲ್ಲಿ ಹಲವು ಮೈಲಿಗಲ್ಲುಗಳನ್ನು ದಾಟಿದ ಬಳಿಕ, ಹರಿವು ಕ್ರಿಯೇಷನ್ಸ್ ಪುಸ್ತಕ ಪ್ರಕಾಶನ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳಬೇಕೆಂಬ ತನ್ನ ಕನಸನ್ನು ನನಸಾಗಿಸುವ ಹಾದಿಯಲ್ಲಿ, 2021 ರ ಡಿಸೆಂಬರ್ 5 ರಂದು ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಚಂದದ ಪುಸ್ತಕ ಮಳಿಗೆಯೊಂದನ್ನು ತೆರೆಯುವುದರ ಜೊತೆಗೆ, www.harivubooks.com ಮಿಂದಾಣದ ಮೂಲಕ ಪುಸ್ತಕ ಪ್ರಿಯರ ಮನೆಬಾಗಿಲಿಗೇ ಪುಸ್ತಕಗಳನ್ನು ತಲುಪಿಸುವ ಕೆಲಸವನ್ನು ಹೆಮ್ಮೆಯಿಂದ ಮಾಡುತ್ತಿದೆ. ಹರಿವು ಬುಕ್ಸ್‌ನಲ್ಲಿ ಕಾದಂಬರಿ, ಥ್ರಿಲ್ಲರ್, ನಾಡು ನುಡಿ, ಮಕ್ಕಳ ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನ, ವಿಜ್ಞಾನ ಮತ್ತು ತಂತ್ರಜ್ಞಾನ, ಆಧ್ಯಾತ್ಮ, ಪುರಾಣ, ಶಿಕ್ಷಣ ಹಾಗೂ ಇನ್ನೂ ಬಗೆಬಗೆಯ ಸಾವಿರಾರು ಕನ್ನಡ ಪುಸ್ತಕಗಳು ದೊರೆಯುತ್ತವೆ.