ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ 2020 ರಲ್ಲಿ ಆರಂಭವಾದಾಗ ಜನ ಹೇಗೆ ಸ್ಪಂದಿಸಿದ್ದರೊ, 2021 ರಲ್ಲಿ ಕೂಡ ಅಷ್ಟೇ ಒಲವು ತೋರಿದ್ದಾರೆ. ಈ ಧಾರಾವಾಹಿಯ ಜನಪ್ರಿಯತೆ ಇಂದಿಗೂ ಮಾಸಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವಾರಾಂತ್ಯದ ಎರಡು ದಿನಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು, ನೋಡುಗರ ಒತ್ತಾಯದ ಮೇರೆಗೆ ವಾರದ ಐದು ದಿನಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. 2021 ರ ಸಾಲಿನ ಅತ್ಯುತ್ತಮ ಡಬ್ಬಿಂಗ್ ಧಾರಾವಾಹಿಯಾಗಿ ಮಹಾನಾಯಕ ಸತತ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಬೆಂಗಳೂರಿನಲ್ಲಿ ನಡೆದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಹರಿವು ಕ್ರಿಯೇಷನ್ಸ್ ತಂಡದವರು ಹೆಮ್ಮೆಯಿಂದ ಈ ಪ್ರಶಸ್ತಿ ಪಡೆದರು. ಇಂತಹ ಸದಭಿರುಚಿಯ, ಒಳ್ಳೆಯ ಗುಣಮಟ್ಟದ ಧಾರಾವಾಹಿಯನ್ನು ನೋಡುಗರಿಗೆ ನೀಡಲು, ದುಡಿದ ಎಲ್ಲ ದನಿ ಕಲಾವಿದರು ಮತ್ತು ತಂತ್ರಜ್ಞರಿಗೂ ಹಾಗೂ ಇಂತಹ ಅರ್ಥಪೂರ್ಣ ಧಾರಾವಾಹಿಯನ್ನು ಕನ್ನಡಕ್ಕೆ ತರಲು ಮನಸ್ಸು ಮಾಡಿದ ಜೀ಼ ಕನ್ನಡ ವಾಹಿನಿಯ ಮುಖ್ಯಸ್ಥರಿಗೂ ಹರಿವು ಕ್ರಿಯೇಷನ್ಸ್ ಕೃತಜ್ಞತೆ ಸಲ್ಲಿಸಿದೆ.