ಕನ್ನಡ ಅನುವಾದ ಮಾರುಕಟ್ಟೆಯಲ್ಲಿ ಗುಣಮಟ್ಟದ ಸೇವೆ ಒದಗಿಸುವ ತುಡಿತದಿಂದ, ಹರಿವು ಕ್ರಿಯೇಷನ್ಸ್ 2019 ರಲ್ಲಿ ಕನ್ನಡ ಅನುವಾದದ ಕೆಲಸಗಳಲ್ಲಿ ತೊಡಗಿಸಿಕೊಂಡಿತು. ವೈದ್ಯಕೀಯ, ಸಾಹಿತ್ಯ, ಕಾನೂನು, ಸಿನೆಮಾ, ಕೃಷಿ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಇಂಗ್ಲಿಶ್‌ನಲ್ಲಿದ್ದ ವಿಷಯಗಳನ್ನು ಕನ್ನಡಕ್ಕೆ ತರುವಲ್ಲಿ ದೊಡ್ಡ ಮಟ್ಟದ ಗೆಲುವನ್ನು ಕಂಡಿತು. ವೆಲ್ತಿ, ಫೋಟಾನ್‌ ವಿಆರ್‌, ಮೈಲ್ಯಾಂಗ್‌ ಬುಕ್ಸ್‌ ನಂತಹ ದೊಡ್ಡ ಸಂಸ್ಥೆಗಳು ಹರಿವು ಕ್ರಿಯೇಷನ್ಸ್‌ನ ಕೆಲಸವನ್ನು ಮೆಚ್ಚಿ ಬೆನ್ನುತಟ್ಟಿವೆ. ಈ ಸಾಧನೆಯನ್ನು ಗುರುತಿಸಿ ಸಿಲಿಕಾನ್ ಇಂಡಿಯಾ ಎಂಬ ಹೆಸರಾಂತ ಮಾಸಪತ್ರಿಕೆಯು, ಹರಿವು ಕ್ರಿಯೇಷನ್ಸ್‌ ಅನ್ನು ಹುಟ್ಟುಹಾಕಿದ ರತೀಶ ರತ್ನಾಕರ ಮತ್ತು ಶಶಿಧರ ಸೀತಾರಾಮಯ್ಯನವರನ್ನು ಸಂದರ್ಶಿಸಿ, ತನ್ನ ಮಾರ್ಚ್ 2020 ರ ಸಂಚಿಕೆಯಲ್ಲಿ, ಮೆಚ್ಚುಗೆಯ ಬರಹವನ್ನು ಪ್ರಕಟಿಸಿದೆ. ಈ ಬರಹವನ್ನು ಓದಲು ಕೆಳಗಿನ ಕೊಂಡಿಯನ್ನು ಒತ್ತಿ.