ಹರಿವು

ಸಬ್ ಟೈಟಲ್

ಹರಿವು ಕ್ರಿಯೇಷನ್ಸ್ ಎಲ್ಲಾ ಬಗೆಯ ಕಾರ್ಯಕ್ರಮ, ಚಲನಚಿತ್ರ, ಭಾಷಣ, ಸಾಮಾಜಿಕ ಮಾಧ್ಯಮ ವಿಷಯ ಇತ್ಯಾದಿಗಳಿಗೆ ಅತ್ಯುತ್ತಮ ಗುಣಮಟ್ಟದ ಅಡಿಬರಹ ಸೇವೆಗಳನ್ನು ಒದಗಿಸುತ್ತದೆ. ನಿಮ್ಮ ವಿಷಯವನ್ನು ವಿಶ್ವದಾದ್ಯಂತದ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಮಾತು ಮುಖ್ಯ

ಜಾಗತಿಕ ಸಿನೆಮಾ ನೋಡುವವರಿಗೆ, ಅಡಿಬರಹಗಳು ಎಷ್ಟು ಮುಖ್ಯ ಎಂಬುದು ಗೊತ್ತಿರುತ್ತದೆ. ಹೆಚ್ಚಿನ ವಿಡಿಯೋಗಳು ಮತ್ತು ಚಲನಚಿತ್ರಗಳಿಗೆ ಪದಗಳು ನಿರ್ಣಾಯಕ. ಪದಗಳು ಸರಿಯಾಗಿಲ್ಲದಿದ್ದರೆ ಚಲನಚಿತ್ರ ಅಥವಾ ವಿಡಿಯೋವನ್ನು ಗ್ರಹಿಸಲಾಗದು. ತಪ್ಪು ತಪ್ಪಾದ ಅಡಿಬರಹಗಳು ಬೇಡದ ಅರ್ಥ ಕೊಟ್ಟು, ನೋಡುಗರ ದಾರಿ ತಪ್ಪಿಸುತ್ತವೆ. ಪದಗಳು ನಿಖರವಾಗಿ ಹಾಗೂ ಕಲಾತ್ಮಕವಾಗಿದ್ದರೆ, ಅಡಿಬರಹಗಳು ವಿಡಿಯೋವನ್ನು ಮತ್ತಷ್ಟು ಅಂದಗಾಣಿಸುತ್ತವೆ. ಅಡಿಬರಹಗಳ ಅನುವಾದವು ಬಹಳ ನವಿರಾದ ಕೆಲಸ. ಏಕೆಂದರೆ, ಒಂದು ಭಾಷೆಯಲ್ಲಿ ಕೆಲವೇ ಕೆಲವು ಸಾಲುಗಳಲ್ಲಿ ಹೇಳಿ ಮುಗಿಸಬಹುದಾದ ವಿಷಯವನ್ನು ಇನ್ನೊಂದು ಭಾಷೆಯಲ್ಲಿ ಹೇಳಲು ಹೆಚ್ಚಿನ ಸಾಲುಗಳು ಬೇಕಾಗಬಹುದು. ಅಲ್ಲದೆ, ಬೇರೆ ಭಾಷೆ ಹಾಗೂ ಸಂಸ್ಕೃತಿಯ ಜನರಿಗೆ ಅರ್ಥಮಾಡಿಸಲು ಹಿನ್ನೆಲೆಯನ್ನೂ ನೀಡಬೇಕಾಗಬಹುದು. ಮೂಲ ವಿಡಿಯೋದಲ್ಲಿರುವ ಶೈಲಿ ಹಾಗೂ ಭಾವವನ್ನು ಅಡಿಬರಹಗಳಲ್ಲೂ ಮೂಡಿಸಲು, ನಿಜವಾದ ಪರಿಣತಿ ಬೇಕು.

 

ಸರಿಯಾದ ಪದ ಮತ್ತು ಬಳಸುವ ಕಲೆ

ಅನುವಾದದ ನಿಖರತೆ ಮತ್ತು ಸಾಲಿನ ಮೇಲೆ ಹಿಡಿತ ಸಾಧಿಸಿ, ಸಂಭಾಷಣೆಯ ಅರ್ಥಗೆಡದಂತೆ ನೋಡುಗರಿಗೆ ವಿಷಯವನ್ನು ಸರಿಯಾಗಿ ತಲುಪಿಸುವ, ಕನ್ನಡದ ವೃತ್ತಿಪರ ಅಡಿಬರಹಗಾರರ ಸೇವೆಯನ್ನು ನಾವು ಒದಗಿಸುತ್ತೇವೆ. ಚಿಕ್ಕದಾದ, ಆಡಿಯೋ ಇಲ್ಲವೇ ವಿಡಿಯೋ ಸಮಯಕ್ಕೆ ಹೊಂದುವಂತೆ, ಮತ್ತು ನೋಡುಗರಿಗೆ ಸುಲಭವಾಗಿ ಓದಲು ಸಾಧ್ಯವಾಗುವಂತೆ ಅಡಿಬರಹ ಬರೆಯಲು ನಮಗೆ ಸಾಧ್ಯ. ಸಂಭಾಷಣೆಯ ಅರ್ಥ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಣಾಮಕಾರಿಯಾಗಿ ತಿಳಿಸಬಲ್ಲ ಅಡಿಬರಹಗಳನ್ನು ಬರೆಯುವ ನುರಿತ ತಂಡ ನಮ್ಮಲ್ಲಿದೆ. ನಮ್ಮ ಪರಿಣತಿ ಮತ್ತು ವೃತ್ತಿಪರರ ತಂಡದೊಂದಿಗೆ, ವಿವಿಧ ರೀತಿಯ ಮನರಂಜನೆ, ಶೈಕ್ಷಣಿಕ ಕಾರ್ಯಕ್ರಮಗಳು, ಇತ್ಯಾದಿಗಳಲ್ಲಿ ಗುಣಮಟ್ಟದ ಕೆಲಸ ಮತ್ತು ನಿಖರವಾದ ಅಡಿಬರಹದ ಸೇವೆಗಳನ್ನು ನೀಡಿ, ನಮ್ಮ ಗ್ರಾಹಕರ ನಿರೀಕ್ಷೆಯನ್ನು ನಾವು ಪೂರೈಸುತ್ತೇವೆ.

 

ವಿಷಯ ಏನೇ ಇರಲಿ, ಫಾರ್ಮ್ಯಾಟ್ ಯಾವುದೇ ಇರಲಿ

ನಮ್ಮ ಪ್ರತಿಭಾವಂತ ಸಬ್‌ಟೈಟಲ್ ಬರಹಗಾರರು ಸಿನೆಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಇನ್ಫೋಟೈನ್ಮೆಂಟ್, ಕಾರ್ಟೂನ್, ಕಾರ್ಪೊರೇಟ್ ವಿಡಿಯೋ, ಜಾಹಿರಾತು ವಿಡಿಯೋ ಮತ್ತು ಇನ್ನಿತರೆ ದೃಶ್ಯಾಧಾರಿತ ವಿಷಯಗಳಿಗೆ ಅಚ್ಚುಕಟ್ಟಾಗಿ ಹೊಂದುವಂತೆ ಮತ್ತು ಯಾವುದೇ ಗೊಂದಲವಾಗದಂತೆ ಅಡಿಬರಹಗಳನ್ನು ಬರೆಯುತ್ತಾ ಬಂದಿದ್ದಾರೆ. ಈಗಾಗಲೇ ಬೇರೆ ಭಾಷೆಯಲ್ಲಿ ಸಬ್‍ಟೈಟಲ್ ಹೊಂದಿರುವ ವಿಡಿಯೋಗಳಿಗೆ ಕೂಡ ನಾವು ಕನ್ನಡ ಸಬ್‍ಟೈಟಲ್ ಅನುವಾದಗಳನ್ನು ಒದಗಿಸುತ್ತಿದ್ದೇವೆ. ನಾವು ಹಲವು ಮೀಡಿಯಾ ಫಾರ್ಮ್ಯಾಟ್‌ನಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಅರ್ಹ ಮತ್ತು ಅನುಭವಸ್ಥ ವೃತ್ತಿಪರರು ಓದಲು ಸುಲಭವಾಗಿರುವಂತೆ, ಅರ್ಥಗಳು ಬೇರಾಗದಂತೆ ಮತ್ತು ಸಮಯಕ್ಕೆ ಸರಿಯಾಗಿ ಅಡಿಬರಹಗಳನ್ನು ನೀಡುವಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ.

 

ಹೊಸ ತಂತ್ರಜ್ಞಾನದ ಬಳಕೆ

ತಂತ್ರಜ್ಞಾನವನ್ನು ಬಳಸಿಕೊಂಡು, ನಾವು ಫಾಂಟ್‌ಗಳು, ಪದಗಳ ಗಾತ್ರ, ಹಿನ್ನಲೆ ಮತ್ತು ಬಣ್ಣಗಳಂತಹ ಹಲವಾರು ಆಯ್ಕೆಗಳನ್ನು ಬಳಸಿ ಸಬ್‍ಟೈಟಲ್‍ಗಳ ಶೈಲಿಯನ್ನು ಬದಲಾಯಿಸಬಹುದು. ಪ್ರೋಗ್ರಾಮಿಂಗ್ ಆಧಾರಿತ ಶೈಲಿಯನ್ನು ಸಹ ನಾವು ಶಿಫಾರಸು ಮಾಡಬಹುದು. ನಿಮಗೆ ಅಗತ್ಯವಿರುವ ಯಾವುದೇ ಫಾರ್ಮ್ಯಾಟ್‍ನಲ್ಲಿ ಸಬ್‍ಟೈಟಲ್‍ಗಳನ್ನು ಬರೆದು ಕೊಡಬಹುದು. ಕನ್ನಡದ ನಿಮ್ಮ ಎಲ್ಲಾ ನೋಡುಗರಿಗೆ ವಿಡಿಯೋ ಸರಿಯಾಗಿ ಅರ್ಥ ಆಗುವ ಹಾಗೆ ಸಬ್ ಟೈಟಲ್ ಮೂಡಿ ಬರುತ್ತದೆ ಎಂಬ ಭರವಸೆಯನ್ನು ನಾವು ನೀಡುತ್ತೇವೆ.

ಅನುಭವವುಳ್ಳ ಪ್ರತಿಭಾನ್ವಿತ ಬರಹಗಾರರು

ಅಡಿಬರಹವನ್ನು ಬರೆಯುವ ಕಾರ್ಯ ನಮ್ಮಲ್ಲೇ ಪ್ರಾರಂಭವಾಗಿ ನಮ್ಮಲ್ಲೇ ಮುಗಿಯುತ್ತದೆ. ನಮ್ಮ ಪರಿಣತ ಅಡಿಬರಹ ತಿದ್ದುಗರು ಮೂಲ ಸಂಭಾಷಣೆಯನ್ನು, ನಿರೂಪಣೆಯಲ್ಲಿನ ಲೋಪ ದೋಷಗಳನ್ನು ಟೈಮ್‌ಕೋಡ್‌ನೊಂದಿಗೆ ಫಾರ್ಮ್ಯಾಟ್ ಮಾಡಿ ದಾಖಲಿಸುತ್ತಾರೆ. ಪರಿಚಿತವಲ್ಲದ ನುಡಿಗಟ್ಟುಗಳಿದ್ದರೆ, ಶ್ರದ್ಧೆಯಿಂದ ಅವುಗಳ ಅರ್ಥ ಹುಡುಕಿ ಸರಿಯಾಗಿ ಬರೆಯುತ್ತಾರೆ. ಅನುಭವಿ ಬರಹಗಾರರು ಮೂಲ ಭಾಷೆಯ ಫೈಲ್‍ ಅನ್ನು ಪರಿಶೀಲಿಸಿ, ಅನುವಾದ ಮಾಡಲು ಒಂದು ಟೆಂಪ್ಲೇಟ್ ಅನ್ನು ರಚಿಸಿ, ಅದನ್ನು ಅನುವಾದ ಮಾಡುವ ತಂಡಕ್ಕೆ ನೀಡುತ್ತಾರೆ. ಜೊತೆಗೆ ಮೂಲ ವಿಡಿಯೋದ ಕಡಿಮೆ ರೆಸಲ್ಯೂಶನ್ ಆವೃತ್ತಿಯನ್ನು ಕೂಡ ನೀಡಲಾಗುವುದು. ಅನುವಾದಕರು ಸುಲಭವಾಗಿ ತಮ್ಮ ಅನುವಾದದ ಕೆಲಸವನ್ನು ಮಾಡಿ ಮುಗಿಸುವರು.

ಸಬ್‍ಟೈಟಲ್ ದರಗಳನ್ನು ಸಾಮಾನ್ಯವಾಗಿ ಮೂಲ ವಿಡಿಯೋದ ಪ್ರತಿ ನಿಮಿಷಕ್ಕೆ ಇಷ್ಟು ಎಂದು ನಿಗದಿಪಡಿಸಲಾಗುತ್ತದೆ. ನಿಮ್ಮ ಪ್ರಾಜೆಕ್ಟ್ ನ ಮೂಲ ಭಾಷೆ ಮತ್ತು ಅನುವಾದಿಸಬೇಕಾದ ಭಾಷೆ, ಗಡುವು, ದನಿಯ ಗುಣಮಟ್ಟ ಮುಂತಾದ ನಿರ್ದಿಷ್ಟ ಮಾಹಿತಿಯನ್ನು ಪಡೆದು, ಅದರ ಪ್ರಕಾರ ವಿವರವಾದ ದರಪಟ್ಟಿಯನ್ನು ನಾವು ನಿಮಗೆ ನೀಡಬಹುದು.